ಸುಮಾರು 24 ವರ್ಷಗಳಿಂದ ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುರೇಶ್ ಮೂಲ್ಯ ಅವರು ಇಂದು ನಿಧನರಾದರು.
ಈ ಮೊದಲು ಅವರು ಕೂಳೂರು ಅಂಚೆ ಕಚೇರಿಯಲ್ಲಿ ಗ್ರಾಮೀಣ ಅಂಚೆ ನೌಕರರಾಗಿ ಕಾರ್ಯ ನಿರ್ವಹಿಸಿದ್ದರು.
ಮಂಗಳೂರು ಪ್ರಧಾನ ಅಂಚೆ ಕಚೇರಿಯ ವರಿಷ್ಠ ಅಂಚೆ ಪಾಲಕರು, ದಕ್ಷಿಣ ಉಪ ವಿಭಾಗದ ಅಂಚೆ ನಿರೀಕ್ಷಕರು ಹಾಗೂ ಪ್ರಧಾನ ಅಂಚೆ ಕಚೇರಿಯ ಸಮಸ್ತ ಸಹೋದ್ಯೋಗಿಗಳು ಹಾಗೂ ನಿವೃತ್ತ ಸಹೋದ್ಯೋಗಿಗಳು ಶ್ರೀ ಸುರೇಶ್ ಮೂಲ್ಯ ಅವರಿಗೆ ಅಂತಿಮ ನಮನ ಸಲ್ಲಿಸಿದರು.