ಯುವ ವಿಪ್ರ ವೇದಿಕೆ ಟ್ರಸ್ಟ್, ಬೆಂಗಳೂರು ಆಯೋಜನೆ ಮಾಡಿದ 12ನೇ ವರ್ಷದ ವಿಪ್ರ ಬಾಂಧವರಿಗಾಗಿ ನಡೆದ ರಾಜ್ಯ ಮಟ್ಟದ ವಿಪ್ರ ಪ್ರೀಮಿಯರ್ ಲೀಗ್' ವಿಪಿಎಲ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನ ಫೈನ ಲ್ ಪಂದ್ಯದಲ್ಲಿ ಪ್ರಶಾಂತ್ ನಿಂಜೂರ್ ಮತ್ತು ಪ್ರಖ್ಯಾತ್ ನಿಂಜೂರ್ ನೇತೃತ್ವದ ಅಗ್ರಹಾರ ಫ್ರೆಂಡ್ಸ್ ತಂಡವು ಉಡುಪಿ ಸ್ಟ್ರೈಕರ್ಸ್ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ಟ್ರೋಫಿ ಹಾಗೂ ನಗದು 60 ಸಾವಿರ ರೂ.ಗಳನ್ನು ಪಡೆದಿದೆ.
ಬೆಂಗಳೂರಿನ ಎಂ.ಆರ್. ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಹಾಗೂ ಮ್ಯಾನ್ ಆಫ್ ದ ಸೀರಿಸ್ ಪ್ರಶಸ್ತಿ ಅಗ್ರಹಾರದ ವಿಷ್ಣು ಭಟ್ ಕಡಿಯಾಳಿ ಅವರು, ಮತ್ತು ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಪರ್ಕಳದ ನಿತಿನ್ ಉಪಾಧ್ಯ ಅವರು ಪಡೆದಿದ್ದಾರೆ.
ಕರ್ನಾಟಕ ರಾಜ್ಯದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪ್ರಸಿದ್ಧ ಕಾಮೆಂಟೇಟರ್ ಭರತ್ ಚಿಪ್ಲಿ ಬಹು ಮಾನ ವಿತರಿಸಿದರು.