ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ದಿನಾಂಕ :೦೧-೦೪-೨೦೨೫ರಂದು ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೋಸ್ಕರ ಕ್ಷಿತಿಜ-೨೦೨೫ ಉತ್ಸವವನ್ನು ಆಯೋಜಿಸಲಾಗಿತ್ತು. ಈ ಉತ್ಸವದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ.ಶೇಷಪ್ಪ ಅಮಿನ್ ಅವರು ನೆರವೇರಿಸಿದರು. ಗೌರವ ಉಪಸ್ಥಿತಿಯನ್ನು ಕಾರ್ಯದರ್ಶಿಗಳಾದ ಡಾ.ಜಿ.ಎಸ್.ಚಂದ್ರಶೇಖರ್ ಅವರು ವಹಿಸಿದ್ದರು. ಪ್ರಾಂಶುಪಾಲರಾದ ಡಾ.ರಾಮು.ಎಲ್. ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕ್ಷಿತಿಜ-೨೦೨೫ ಉತ್ಸವದಲ್ಲಿ ೧೩ ಕಾಲೇಜುಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನದ ಟ್ರೋಫಿಯನ್ನು ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು. ದ್ವಿತೀಯ ಬಹುಮಾನದ ಟ್ರೋಫಿಯನ್ನು ಎಂ.ಜಿ.ಎಂ ಕಾಲೇಜಿನ ಎನ್.ಎಸ್.ಎಸ್.ವಿದ್ಯಾರ್ಥಿಗಳು ಪಡೆದರು. ಕ್ಷಿತಿಜ-೨೦೨೫ ಉತ್ಸವದ ಸಮಾರೋಪ ಸಮಾರಂಭಕ್ಕೆ ಪಿಪಿಸಿಯ ಶೈಕ್ಷಣಿಕ ಸಲಹೇಗಾರರಾದ ಶ್ರೀರಮಣ ಐತಾಳ್, ಲೋಟಸ್ ಹೋಟೇಲ್ನ ಮಾಲೀಕರಾದ ಅಜಯ್ ಶೆಟ್ಟಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರಾಮು.ಎಲ್, ಗೌರವ ಉಪಸ್ಥಿತಿಯನ್ನು ಉಡುಪಿ ವಲಯದ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ನಿಕೇತನ, ಡಾ.ರಘು ನಾಯಕ್, ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ IQAC ಸಂಯೋಜಕರಾದ ಡಾ.ವಿನಯ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀಮತಿ ಜಯಲಕ್ಷೀ, ಎನ್.ಎಸ್.ಎಸ್. ಅಧಿಕಾರಿಗಳಾದ ಡಾ.ನಾಗರಾಜ.ಜಿ.ಪಿ., ಸಹ ಯೋಜನಾಧಿಕಾರಿಗಳಾದ ಶ್ರೀ ಮಹೇಶ್ ಶೆಟ್ಟಿ, ಶ್ರೀಮತಿ ಸ್ವಾತಿ.ಪಿ.ಕೆ, ಕುಮಾರಿ ಸ್ವಾತಿ ವಿದ್ಯಾರ್ಥಿ ನಾಯಕರಾದ ಮೇಘನಾ, ಸುಚಿತ್, ಯಶಸ್ಆಚಾರ್ಯ, ಸಂಜನಾ ಎಸ್ ಪ್ರಜಾರಿ, ಶ್ರೀಲಕ್ಷ್ಮೀ , ಸುಶಾನ್, ಹಾಜರಿದ್ದರು.