ಶ್ರೀ ಪೇಜಾವರ ಮಠದ ವತಿಯಿಂದ ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ನಡೆದ ಭಕ್ತಿಸಿದ್ಧಾಂತೋತ್ಸವ,ರಾಮೋತ್ಸವ ಹಾಗೂ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ, ಹಲವಾರು ವರ್ಷಗಳಿಂದ ನೀಲಾವರ ಗೋಶಾಲೆಗೆ ಹಸಿರು ಮೇವನ್ನು ತಾವೇ ಬೆಳೆದು ನೀಡುತ್ತಿರುವ ವಿಶೇಷ ಸೇವೆಗಾಗಿ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಮಾಡುತ್ತಿರುವ ಸೇವೆಗಾಗಿ ಕುಂಜಾರುಗಿರಿಯ ಗಿರಿಬಳಗಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ದೇವದಾಸ್, ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ ಆಳ್ವ,ಅಂತಾರಾಷ್ಟ್ರೀಯ ಸಂಗೀತ ಕಲಾವಿದರಾದ ಡಾ.ಎಲ್ ಸುಬ್ರಹ್ಮಣ್ಯಂ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ರಾಮವಿಠಲ ಪ್ರಶಸ್ತಿ ನೀಡಿ ಅನುಗ್ರಹಿಸಿದರು.
ಬಳಗದ ಗೌರವಾಧ್ಯಕ್ಷರಾದ ಗೋವಿಂದ ಭಟ್ ಹಾಗೂ ಅಧ್ಯಕ್ಷರಾದ ನವೀನಕುಮಾರ್ ಪ್ರಶಸ್ತಿ ಸ್ವೀಕರಿಸಿದರು.