ಸೃಜನಶೀಲ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಆ್ಯಂಡ್ ಗ್ಯಾಲರಿಯಲ್ಲಿ ಮಂಗಳವಾರ ನಡೆದ ವಿಶ್ವಕಲಾ ದಿನಾಚರಣೆ ಉದ್ಘಾಟಿಸಿ ಪತ್ರಕರ್ತ ಜನಾರ್ದನ್ ಕೊಡವೂರು ಮಾತನಾಡಿದರು.
ಬೃಹತ್ 'ಮೊನಾಲಿಸಾ' ರಂಗೋಲಿ ಕಲಾಕೃತಿ ಮೂಲಕ ಕಲಾ ವಿದ್ಯಾರ್ಥಿ ಹಾಗೂ ಪೋಷಕ ಸಮೂಹ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲ ಎಸ್. ಕುಂದರ್, ವಿದ್ಯಾರ್ಥಿ ಪೋಷಕಿ ವಾಣಿ ರಾವ್ ಅಭ್ಯಾಗತರಾಗಿದ್ದರು.
ಕಲಾ ವಿದ್ಯಾರ್ಥಿನಿಯರಾದ ಅನೂಷ ಆಚಾರ್ಯ, ಉಜ್ವಲ್ ನಿಟ್ಟೆ, ಅಶ್ವಿನಿ ಶೆಟ್ಟಿ, ಮೀತಾ ಪೈ ಕೈಯಲ್ಲಿ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಮೂಡಿ ಬಂದ 150 ಚ.ಅಡಿ ವಿಸ್ತೀರ್ಣದ ಮೊನಾಲಿಸ ಕಲಾಕೃತಿ ಎಲ್ಲರನ್ನು ಆಕರ್ಷಿಸಿತು.
ಭಾವನಾತ್ಮಕವಾಗಿ ಕಲೆಯಲ್ಲಿ ಸ್ಪಂದಿಸಿದಾಗ ಮಾತ್ರ ಇಂಥ ಕಲಾಚಟುವಟಿಕೆಗಳು ಮೂಡಿ ಬರಲು ಸಾಧ್ಯ ಎಂದು ಶ್ಯಾಮಲ ಎಸ್. ಕುಂದರ್ ಹೇಳಿದರು.
ಇತ್ತೀಚಿಗೆ ನಡೆದ ಮಣಿಪಾಲ ಮತ್ತು ಕುಂದಾಪುರ ತ್ರಿವರ್ಣ ಆರ್ಟ್ ಕ್ಲಾಸಸ್‌ನ 19ರಿಂದ 75 ವಯೋಮಿತಿಯ 23 ವಿದ್ಯಾರ್ಥಿಯರ 'ಪರಂಪರಾ' ಚಿತ್ರಕಲಾ ಪ್ರದಶನದ ಅಭಿನಂದನಾ ಪತ್ರ ಮತ್ತು ವಿವಿಧ ಪ್ರಶಸ್ತಿಗಳನ್ನು ವಿತರಿಸಿದರು.
ಕಲಾ ಕೇಂದ್ರದ ಮಾಗದರ್ಶಕ ಕಲಾವಿದ ಹರೀಶ್ ಸಾಗಾ ಸ್ವಾಗತಿಸಿದರು. ಕಲಾ ವಿದ್ಯಾರ್ಥಿನಿಯರಾದ ವಿಧು ಶಂಕರ್ ಬಾಬು ಪ್ರಾರ್ಥಿಸಿ. ಅರುಣಾ ನಾಯರ್ ಕಾಠ್ಯಕ್ರಮ ನಿರೂಪಿಸಿ, ಉಜ್ವಲ್ ನಿಟ್ಟೆ ವಂದಿಸಿದರು