ಉಡುಪಿ: ಕರ್ನಾಟಕ ಸರಕಾರ ಕೊಡಮಾಡುವ 2025ನೇ ಸಾಲಿನ, ಹಸಿರು ಕ್ರಾಂತಿಯ ಹರಿಕಾರ, ರಾಷ್ಟ ನಾಯಕ, ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬಾ ಜಗಜೀವನ ರಾಂ ಪ್ರತಿಷ್ಠಿತ ಪ್ರಶಸ್ತಿಯನ್ನು ದಲಿತಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಗೆ ಶನಿವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಧಾನ ಮಾಡಿದರು.
ಕಳೆದ ೪ ದಶಕಕ್ಕೂ ಹೆಚ್ಚು ಕಾಲ ಕರಾವಳಿ ಮತ್ತು ಮಳೆನಾಡಿನ ಊದ್ದಕ್ಕೂ ದುರ್ಬಲರಲ್ಲಿ,ಅಸ ಹಾಯಕರಲ್ಲಿ ಸ್ವಾಭಿಮಾನ ಮೂಡಿಸಿ ಸಂಘಟನೆಯ ಪ್ರಜ್ಞಾವ೦ತಿಕೆಯನ್ನು ಬೆಳೆಸಿದ ಜಯನ್ಮಲ್ಪೆಗೆ ಈ ಬಾರಿ ಸರಕಾರವೇ ಗುರುತಿಸಿ ಪ್ರಶಸ್ತಿ ನೀಡಿರುವುದು ವಿಶೇಷ ಮತ್ತು ಉಡುಪಿಜಿಲ್ಲೆಗೆ ಇತಿಹಾಸದಲ್ಲಿ ಇದು ಪ್ರಥಮವಾಗಿದೆ.
ನಾಡಿನ ಕೋಮು ಸೌಹಾರ್ದತೆಗಾಗಿ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಜಯನ್ಮಲ್ಪೆ, ಅಧಿಕಾರಿಗಳ ಭ್ರಷ್ಟತೆ, ಬಂಡವಾಳಶಾಹಿಗಳ ದೌರ್ಜನ್ಯ,ಪೊಲೀಸರ ಅಮಾನವೀಯತೆ,ರಾಜ ಕಾರಣಿಗಳ ಹುಸಿ ಜಾತ್ಯಾತೀತತೆ ಬಯಲಿಗೆಳೆದು ಹೋರಾಟ ಮಾಡುತ್ತಾ, ದಲಿತ ಜಾಗೃತಿಗಾಗಿ ನೂರಾರು ವಿಚಾರ ಸಂಕಿರಣ, ಸಮಾವೇಶ ಮಾಡಿದ್ದರು.
ಅನ್ಯಾಯಕ್ಕೊಳಗಾದವರ ಪರವಾಗಿ,ಪ್ರತಿಭಟನೆ,ಮೆರವಣಿಗೆ, ಧರಣಿ ಮುಂತ್ತಾದ ಕಾರ್ಯಕ್ರಮಗಳನ್ನುಸಂಘಟಿಸಿದ್ದ ಜಯನ್ ಮಲ್ಪೆ ಒಂದು ಕಾಲದಲ್ಲಿ ದಲಿತ ಚಳವಳಿಯ ಆಳದಮರದ ಮರವಾಗಿಬೆಳೆದಿದ್ದರು. ಮುಂಗಾರು ದಿನಪತ್ರಿಕೆ,ಸುದ್ಧಿಸಂಗಾತಿ ವಾರಪತ್ರಿಕೆ ಹಾಗೂ ಮುಂಬಾಯಿ೦ದ ಪ್ರಕಟ ವಾಗುತ್ತಿದ್ದ ಉದಯ ದೀಪ ದಿನಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡಿದ್ದ ಜಯನ್ ಮಲ್ಪೆಯವರು ನಾಡಿನ ಅನೇಕ ದಿನಪತ್ರಿಕೆ,ವಾರಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.
2021ರಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ, 2020ರ ರಾಷ್ಟೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರ್ಕಳ ಪತ್ರಕರ್ತರ ಸಂಘ ಜನದನಿ ಸಿರಿ ಪ್ರಶಸ್ತಿ, 2018ರಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಜಿಲ್ಲಾಮಟ್ಟದ ಸದಸ್ಯರನ್ನಾಗಿ ರಾಜ್ಯ ಸರಕಾರಆಯ್ಕೆ ಮಾಡಿತ್ತು.
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಾಹಿ ಸಿರುವ ಇವರು ದಲತ್ ವರ್ಲ್ಡ್ ವೆಬ್ ಸೈಟ್‌ನ್ನು ಲೋಕಾರ್ಪಣೆಗೊಳಿಸಿರುತ್ತಾರೆ.ಕಳೆದ ಒಂದುವರೆ ವರ್ಷದಿಂದ ದಿವಾಣ ಪಂಚ್ ಯುಟ್ಯೂಬ್ ಚಾನಲ್‌ನಲ್ಲಿ ಒಂದು ವರ್ಷಗಳ ಕಾಲ ನಾಡಿನ ರಾಜಕೀಯ ಹಾಗೂ ವಿವಿಧ ವಿದ್ಯಮಾನಗಳ ಬಗ್ಗೆ ವಿಶ್ಲೇಷಣೆ ಮಾಡಿದ ಎಪಿಸೋಡು ಬಾರೀ ಜನಪ್ರೀಯತೆ ಹೊಂ ದಿತ್ತು.
ನಿರ0ತರ ಹೋರಾಟಗಾರರಾಗಿದ್ದ ಜಯನ್ ಮಲ್ಪೆ ರಕ್ತ ಸುರಿಸಿ ಕಟ್ಟಿದ ಸಂಘಟನೆಗಳು ಕೆಲವರ ಸ್ವಾರ್ಥಕ್ಕಾಗಿ ಬಲಿಯಾಗುವುದನ್ನು ಕಂಡು ಕಳೆದ ಹತ್ತು ವರ್ಷದಿಂದ ಜಿಲ್ಲೆಯಲ್ಲಿ ದಲಿತ ಯುವಕ, ಯುವತಿಯರಲ್ಲಿ ಅಂಬೇಡ್ಕರ್ ಚಿ೦ತನೆಯನ್ನು ಹುಟ್ಟುಹಾಕಿ,ಅಂಬೇಡ್ಕರ್ ಯುವಸೇನೆ ಎಂಬ ಸಂಘ ಟನೆ ಮೂಲಕ ಹೊಸ ನಾಯಕತ್ವಕ್ಕೆ ಚಾಲನೆ ನೀಡಿದ್ದಾರೆ.
ಜಯನ್ ಮಲ್ಪೆಯವರ ಬದುಕು ಮತ್ತು ಹೋರಾಟ ಹಾಗೂ ಸಾಹಿತ್ಯವನ್ನು ಮನಗಂಡ ಸರಕಾರ ೨೦೨೫ ನೇ ಸಾಲಿನ ಡಾ.ಬಾಬಾ ಜಗಜೀವನ ರಾಂ ಪ್ರಶಸ್ತಿಯ ಜೊತೆಗೆ ಸುಮಾರು 5ಲಕ್ಷ ನಗದು ಮತ್ತು 20ಗ್ರಾಂ.ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕ ನೀಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೌರವಿಸಿದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್,ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ, ವಿಧಾನ ಪರಿಷತ್ ಸ್ಪೀಕರ್ ಬಸವರಾಜ್ ಹೊರಟಿ, ಸಚಿವರುಗಳಾದ ಜಿ.ಪರವೇಶ್ವರ್, ಮುನಿಯಪ್ಪ, ರಾಮ ಲಿಂಗ ರೆಡ್ಡಿ ಮುಂತಾದವರು ಪ್ರಶಸ್ತಿ ಸಮಾರಂಭದಲ್ಲಿ ಸಾಕ್ಷಿಯಾಗಿದ್ದರು.