ಉಡುಪಿ: ಪ್ರಸಿದ್ಧ ತಾಂತ್ರಿಕ ಸೇವಾ ಸಂಸ್ಥೆ “ಮೊಲ್ಟೋಕೇರ್" ಫಾಂಚೈಸಿಯನ್ನು ಉಡುಪಿಯ ಓಷಿಯನ್ ಪರ್ಲ್‌ಹೋಟೆಲ್ ಫೆಸಿಫಿಕ್ ಹಾಲ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಇಂದು ಪ್ರಾರಂಭಿಸಲಾಯ್ತು.
ಉಡುಪಿಯ ಪ್ರಸಿದ್ದ ಗೃಹ ಸಮುಚ್ಚಯ ನಿರ್ಮಾಣ ಸಂಸ್ಥೆ ಶ್ರೀನಿಧಿ ಡೆವೆಲಪರ್ಸ್ ನ ನಿರ್ದೇಶಕ ಶ್ರೀ ಕೃಷ್ಣರಾಜ ತಂತ್ರಿಯವರು ಮೊಲ್ಟೋಕೇರ್ ಉಡುಪಿ ಶಾಖೆಯ ಪ್ರವರ್ತಕರಾಗಿದ್ದು, ಅವರ ಮಾತೃಶ್ರೀ ಶ್ರೀಮತಿ ಶಾಂತಾ ತಂತ್ರಿಯವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಪ್ರಸಿದ್ಧ ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡುತ್ತಾ “ ದುಬೈಯಲ್ಲಿ ಗೃಹ ಸಮುಚ್ಚಯಗಳ ನಿರ್ವಹಣೆ, ಏರ್ ಕಂಡೀಷನರ್, ಎಲೆಕ್ನಿಕ್, ಪ್ಲಂಬಿಂಗ್ ಹಾಗೂ ಗೃಹಗಳ ಸಮಗ್ರ ಸ್ವಚ್ಛತೆಗಳಿಗೆ ಪ್ರಸಿದ್ದಿ ಪಡೆದಿರುವ ಮೊಲ್ಟೋಕೇರ್ ಸಂಸ್ಥೆ ಈಗ ಉಡುಪಿಯಂತಹ ಬೆಳೆಯುತ್ತಿರುವ ನಗರದಲ್ಲಿ ಪ್ರಾರಂಭವಾಗುತ್ತಿರುವುದು ಸಂತೋಷದ ಸಂಗತಿ. ಈ ಸೇವಾ ಸೌಲಭ್ಯಗಳು ಈಗಿನ ವ್ಯವಸ್ಥೆಯಲ್ಲಿ ಅತೀ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ಈ ಸೇವಾ ಸೌಲಭ್ಯ ವಿಸ್ತರಿಸಲಿ" ಎಂದು ಹಾರೈಸಿದರು.
ಸಂಸ್ಥೆಯ ಪ್ರವರ್ತಕ ಕೃಷ್ಣರಾಜ ತಂತ್ರಿ ಕಾರ್ಯಕ್ರಮದ ಮೊದಲಿಗೆ ಸ್ವಾಗತಿಸಿ, ಸಂಸ್ಥೆಯ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಪ್ರಾಪರ್ಟಿ ಮೈಂಟೇನೆನ್ಸ್ ಮತ್ತು ಪ್ರಾಪರ್ಟಿ ಮೆನೇಜ್‌ಮೆಂಟ್‌ಗಳ ಕುರಿತು ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕ್ರೆಡೈ ಉಡುಪಿ ಸಂಸ್ಥೆಯ ಕಾರ್ಯದರ್ಶಿ ಸುಧೀರ್ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.
ಉಜ್ವಲ್ ಡೆವಲಪರ್‌ನ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಿಸಿದ ವಿಜೇತಾ ತಂತ್ರಿ ಕೊನೆಯಲ್ಲಿ ವಂದಿಸಿದರು.