ಜಗದ್ಗುರು ಮಧ್ವಾಚಾರ್ಯರ ಮಹಿಮೆಯನ್ನು ಪ್ರತಿಬಿಂಬಿಸುವ ಹಾಗು ಪೆರ್ಣಂಕಿಲ ಶ್ರೀ ಮಹಾಲಿಂಗೇ ಶ್ವರ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ಭಕ್ತಿ ಸಿದ್ಧಾಂತೋತ್ಸವ ಹಾಗು ರಾಮೋತ್ಸವದ ಪ್ರಯುಕ್ತ ಉಡುಪಿಯಾದ್ಯಂತ ಸಂಚರಿಸಲಿರುವ ಭಕ್ತಿರಥ ಯಾತ್ರೆಗೆ ಕೊಡವೂರು ದೇವಳದಲ್ಲಿ ಸ್ವಾಗತ ನೀಡಿ, ದೇವರಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.
ರಥಯಾತ್ರೆಯಲ್ಲಿ ಆಗಮಿಸಿದ ವಿದ್ವಾನ್ ಶಶಾಂಕ್ ಭಟ್ , ವಿದ್ವಾನ್ ಕೃಷ್ಣರಾಜ್ ಭಟ್ ಕುತ್ಪಾಡಿ, ಹಾಗು ವಿ ಜಿ ಆಚಾರ್ಯರವರನ್ನು ಶ್ರೀ ದೇವಳದ ವತಿಯಿಂದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಪ್ರಸಾದ್ ಭಟ್, ವಾದಿರಾಜ್ , ಎ ರಾಜ ಸೇರಿಗಾರ್, ಯಶೋಧರ್, ಭಾಸ್ಕರ್ ಪಾಲನ್ , ಕೆ. ಬಾಬ, ಉಷಾ ಆನಂದ್ , ಶೀಲಾ ದೇವಾಡಿಗ , ಶಂಕರನಾರಾಯಣ ಭಕ್ತವೃಂದದ ಅಧ್ಯಕ್ಷ ದಿವಾಕರ ಶೆಟ್ಟಿ, ಶಂಕರನಾರಾಯಣ ಸೇವಾ ಸಮಿತಿಯ ಕಾರ್ಯದರ್ಶಿ ಜನಾರ್ದನ್ ಕೊಡವೂರು , ರವಿರಾಜ್ ಹೆಗ್ಡೆ , ರಾಮ ಶೇರಿಗಾರ್, ಶೇಖರ್ ಉದ್ದಿನ ಹಿತ್ಲು, ಪ್ರಕಾಶ್ ಬಂಗೇರ, ಅರುಣ್ ಗಾಣಿಗ ದೇವಳದ ಉಮೇಶ್ ರಾವ್, ವಾಸುದೇವ ಉಪಾಧ್ಯ, ರೋಹಿಣಿ ಬಾಯರಿ, ಪ್ರೇಮ ಬಾಯರಿ ಇದ್ದರು.