Header Ads Widget

ವಿಟ್ಲ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕ ಪೊಲೀಸರ ವಶಕ್ಕೆ!

ವಿಟ್ಲ: ಯುವತಿಯರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಮಾಡುತ್ತಾ ಭೇಟಿಯಾಗಲು ಬಂದ ಯುವಕನೊಬ್ಬ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಒದೆ ತಿಂದ ಘಟನೆ ವಿಟ್ಲ ಹೊರವಲಯದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.

ಯುವತಿಯರ ಮೊಬೈಲ್ ಸಂಖ್ಯೆಗೆ ಅಶ್ಲೀಲ ಮೆಸೇಜ್ ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಜಂಕ್ಷನ್ ಬಳಿ ನಡೆದಿದೆ.

ಯುವತಿಯೋರ್ವಳ ನಂಬರ್ ಕೇಳಿದ್ದ ಈತನಿಗೆ ಆಕೆ ಮೊದಲೇ ಸಂಶಯಗೊಂಡ ಕಾರಣ ಪರಿಚಯದ ಯುವಕನ ಮೊಬೈಲ್ ನಂಬರ್ ಕೊಟ್ಟಿದ್ದಳು. ಯುವತಿಯ ನಂಬರ್ ಎಂದು ತಿಳಿದಿದ್ದ ಆ ಯುವಕ ರಾತ್ರಿಯಿಡಿ ಆಶ್ಲೀಲ ಸಂದೇಶ ಕಳುಹಿಸಿದ್ದಾನೆ. ಅಲ್ಲದೇ ತಡರಾತ್ರಿ ಬಳಿಕ ಬಟ್ಟೆ ಬಿಚ್ಚಿ ವೀಡಿಯೋ ಕಾಲ್ ಮಾಡುವಂತೆ ಪದೇ ಪದೇ ಮೆಸೇಜ್ ಮೂಲಕ ಒತ್ತಾಯಿಸಿ ಮಾನಸಿಕ ಕಿರುಕುಳ ನೀಡಿದ್ದಾನೆ. ಅಷ್ಟಕ್ಕೂ ತೃಪ್ತನಾಗದ ಆತ ಯುವತಿಯನ್ನು ಭೇಟಿಯಾಗಲು KA19 HQ 4068 ಸಂಖ್ಯೆಯ ಆಕ್ಟಿವಾದಲ್ಲಿ ಬಂದು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಯುವಕ ಕನ್ಯಾನ ಸಮೀಪದ ಪಂಜಾಜೆ ನಿವಾಸಿ ಉಸ್ಮಾನ್ ಪುತ್ರ ಸವಾದ್(22) ಎಂದು ತಿಳಿದುಬಂದಿದೆ.

ಬೆಂಗಳೂರಿನ ಕೋರಮಂಗಲದ ಡ್ರೆಸ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿರುವ ಸವಾದ್ ರಂಝಾನ್ ಹಬ್ಬಕ್ಕೆ ಬಂದಿದ್ದ. ಇದೇ ಸಂದರ್ಭ ಈತನ ಅದೃಷ್ಟ ಕೆಟ್ಟಿದ್ದ ಕಾರಣ ಮಾಡಬಾರದ್ದನ್ನು ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.