ಶ್ರೀ ರಾಮ ನವಮಿಯ ಪ್ರಯುಕ್ತ ಕಾರ್ಕಳ ಬೈಲೂರಿನ ತ್ರಿವರ್ಣ ಆರ್ಟ್ ಕ್ಲಾಸಸ್ ಹಾಗೂ ಕರಾವಳಿ ಯೂತ್ ಕ್ಲಬ್ ರಿ. ಉಡುಪಿ ಸಹಯೋಗದ ವತಿಯಿಂದ ಇಲ್ಲಿನ ಕಲಾ ತರಗತಿಯ ವಿದ್ಯಾರ್ಥಿಗಳು ರಚಿಸಿರುವ 200 ಅಡಿ ವಿಸ್ತೀರ್ಣದ ಕಪ್ಪು ಮತ್ತು ಕೇಸರಿ ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿಯು ಅನಾವರಣಗೊಂಡಿತು.
ಕಲಾಕೃತಿಯ ಅನಾವರಣ:-
ತುಳು ರಂಗಭೂಮಿಯ ಖ್ಯಾತ ಕಲಾವಿದ, ನಿರ್ದೇಶಕ ಹಾಗೂ ತುಳು ಚಲನಚಿತ್ರ ನಟ, ಸಂಭಾಷಣೆಕಾರ ಶ್ರೀ ಪ್ರಸನ್ನ ಶೆಟ್ಟಿ ಬೈಲೂರು, ಊರಿನ ಗಣ್ಯರಾದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಶ್ರೀ ವಿಕ್ರಂ ಹೆಗ್ಡೆ, ಹಿಂದೂ ಜಾಗರಣ ವೇದಿಕೆಯ ಮುಖಂಡ ಶ್ರೀ ರಮೇಶ್ ಕಲ್ಲೊಟ್ಟೆ ಇವರು ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿ ಪೋಷಕರೊಂದಿಗೆ ಪುಷ್ಪಾರ್ಚನೆಗೈದರು.
ತರಗತಿ ವಿದ್ಯಾರ್ಥಿಗಳಾದ ಹಿಮಾನಿ ಡಿ. ಶೆಟ್ಟಿ, ಪ್ರಥ್ವಿಜ್ ಶೆಟ್ಟಿ, ತೇಜಸ್ ದೇವಾಡಿಗ, ಸಾಕ್ಷಿತ್ ಶೆಟ್ಟಿ, ಸದ್ವಿನ್ ಶೆಟ್ಟಿ, ಸ್ಪರ್ಶ್ ಪೂಜಾರಿಯವರು ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಈ ಆಕರ್ಷಕ ಕಲಾಕೃತಿಯು ಮೂಡಿ ಬಂದಿರುತ್ತದೆ.