ವಿಶ್ವ ಆರೋಗ್ಯ ದಿನವನ್ನು ಎಪ್ರಿಲ್ 7 ರಂದು ಆಚರಿಸುವ ನಿಮಿತ್ತ, ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆ ವಿಶೇಷ ಆರೋಗ್ಯ ತಪಾಸಣೆ ಯೋಜನೆಯನ್ನು ಪ್ರಕಟಿಸಿದೆ. ಈ ಉಪಕ್ರಮದಲ್ಲಿ, ಏಪ್ರಿಲ್ 1 ರಿಂದ ಏಪ್ರಿಲ್ 30, 2025 ರವರೆಗೆ, ಸಮುದಾಯದಲ್ಲಿ ಆರೋಗ್ಯ ರಕ್ಷಣೆ ಮತ್ತು ರೋಗಗಳ ಆರಂಭಿಕ ಪತ್ತೆಹಚ್ಚುವಿಕೆಯನ್ನು ಉತ್ತೇಜಿಸುವ ಬದ್ಧತೆಯ ಭಾಗವಾಗಿ ಆಸ್ಪತ್ರೆಯು ಕಡಿಮೆ ದರದಲ್ಲಿ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳನ್ನು ಒದಗಿಸುತ್ತಿದೆ.
ಈ ಯೋಜನೆಯಡಿ, 2025ರ ಏಪ್ರಿಲ್ 1 ರಿಂದ 30ರವರೆಗೆ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ. ಈ ಮೂಲಕ ನಮ್ಮ ಸಮುದಾಯದಲ್ಲಿ ಆರೋಗ್ಯ ರಕ್ಷಣೆ ಮತ್ತು ರೋಗಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಲು ಉತ್ತೇಜಿಸುವಲ್ಲಿ ಆಸ್ಪತ್ರೆಯ ಬದ್ಧತೆಯಿಂದಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಈ ವರ್ಷದ ವಿಶ್ವ ಆರೋಗ್ಯ ದಿನದ ಧ್ಯೇಯವಾಕ್ಯ "ಆರೋಗ್ಯಕರ ಆರಂಭಗಳು, ಆಶಾದಾಯಕ ಭವಿಷ್ಯಗಳು", ಜನರು ಆರೋಗ್ಯಕರ ಜೀವನದ ಕಡೆಗೆ ಮುನ್ನಡೆಯುವಂತೆ ಪ್ರೋತ್ಸಾಹಿಸುತ್ತದೆ. ಇದರ ಅನುಸಾರವಾಗಿ, ವಿವಿಧ ವಯೋಮಾನದವರ ಆರೋಗ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಸಮಗ್ರ ಆರೋಗ್ಯ ತಪಾಸಣಾ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಿದೆ. ಈ ಪ್ಯಾಕೇಜ್‌ಗಳ ಮೂಲಕ ಮಧುಮೇಹ, ರಕ್ತದೊತ್ತಡ, ಹೃದಯರೋಗ, ಮೂತ್ರಪಿಂಡ ಮತ್ತು ಯಕೃತ್ತಿನ ಸಮಸ್ಯೆಗಳು ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ, ಪರಿಣಾಮಕಾರಿ ಚಿಕಿತ್ಸೆಗೆ ಅವಕಾಶ ನೀಡಲಾಗುವುದು.
ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ ಉಮಾಕಾಂತ್ ಅವರು, "ಇಂದಿನ ವೇಗದ ಜೀವನ ಶೈಲಿಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಸಂಕೀರ್ಣತೆ ಉಂಟಾಗುವವರೆಗೂ ಗಮನಕ್ಕೆ ಬರುವುದಿಲ್ಲ. ನಿಯಮಿತ ಆರೋಗ್ಯ ತಪಾಸಣೆಯಿಂದ ಆರಂಭಿಕ ಹಂತದಲ್ಲೇ ಸಮಸ್ಯೆಗಳ ಪತ್ತೆ ಸಾಧ್ಯವಿದ್ದು, ಇದು ಚಿಕಿತ್ಸೆ ಸರಿಯಾಗಿ ದೊರೆಯಲು, ಸಂಕೀರ್ಣತೆ ತಪ್ಪಿಸಲು ಹಾಗೂ ಜೀವನದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ಸಾರ್ವಜನಿಕರನ್ನು ನಿಯತಕಾಲಿಕ ಆರೋಗ್ಯ ಸೇವೆಯತ್ತ ಮುನ್ನಡೆಸಲು ನಮ್ಮ ಪ್ರಯತ್ನವಾಗಿದೆ," ಎಂದು ಹೇಳಿದರು.
ಹೆಚ್ಚಾಗಿ ನಿರ್ಲಕ್ಷಿಸಲ್ಪಡುವ ವಯಸ್ಕರ ಲಸಿಕೆಗಳ ಕುರಿತು ಮಾರ್ಗದರ್ಶನ ಕೂಡಾ ಈ ಆರೋಗ್ಯ ತಪಾಸಣಾ ಪ್ಯಾಕೇಜ್‌ಗಳಲ್ಲಿ ಸೇರಿಸಲಾಗಿದೆ. ಇನ್‌ಫ್ಲುಯೆನ್ಜಾ, ನ್ಯುಮೋನಿಯಾ, ಹೆಪಟೈಟಿಸ್ ಮತ್ತು ಟೆಟನಸ್ ಮುಂತಾದ ಲಸಿಕೆಗಳು ಹಿರಿಯ ನಾಗರಿಕರು ಹಾಗೂ ಆರೋಗ್ಯ ಸಮಸ್ಯೆ ಇರುವವರಿಗೆ ವಿಶೇಷವಾಗಿ ಅಗತ್ಯವಾಗಿರುತ್ತವೆ.
ಡಾ. ಟಿ.ಎಂ.ಎ. ಪೈ ಆಸ್ಪತ್ರೆ, ಸಮುದಾಯಕ್ಕೆ ಸುಲಭವಾದ ಹಾಗೂ ನೈತಿಕ ಆರೋಗ್ಯ ಸೇವೆಗಳನ್ನು ನೀಡುವ ಜೊತೆಯಲ್ಲಿಯೇ ರೋಗನಿರೋಧಕ ಚಿಕಿತ್ಸೆಯ ಕುರಿತು ಜಾಗೃತಿ ಹೆಚ್ಚಿಸುವುದರಲ್ಲಿ ಸದಾ ಬದ್ಧವಾಗಿದೆ. ಉಡುಪಿ ಜಿಲ್ಲೆಯ ಸಾರ್ವಜನಿಕರು ತಮ್ಮ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಹಾಗೂ ಅಪಾಯಾಂಶಗಳು ಮತ್ತು ಜೀವನಶೈಲಿ ಬದಲಾವಣೆಗಳ ಕುರಿತು ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲು ಈ ಅವಕಾಶವನ್ನು ಬಳಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಅಥವಾ ಆರೋಗ್ಯ ತಪಾಸಣೆಯ ನಿಗದಿಗಾಗಿ 7259361555 ಅನ್ನು ಸಂಪರ್ಕಿಸಬಹುದು.