ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಗೀತಾ ಮಂದಿರ ಭಾರತ್ ಮೇಳ ದ ಅಂಗವಾಗಿ ತುಳು ಕೂಟ (ರಿ.) ಉಡುಪಿಯ ಆಯೋಜನೆಯಲ್ಲಿ ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಹಾಗೂ SASS ಉಡುಪಿ ಜಿಲ್ಲಾ ಮತ್ತು ತಾಲೂಕು ಮಹಿಳಾ ಘಟಕಗಳ ಸಹಭಾಗಿತ್ವದಲ್ಲಿ ತುಳುನಾಡ ಗೊಬ್ಬುಲು ಸ್ಪರ್ಧೆಗಳನ್ನು ದಿನಾಂಕ 19 4 2025, ಶನಿವಾರ ಬೆಳಿಗ್ಗೆ 9.30 ರಿಂದ ಶ್ರೀ ಕೃಷ್ಣ ಮಠ - ಗೀತಾ ಮಂದಿರ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು, ಬಾಲಕ ಬಾಲಕಿಯರು ಮತ್ತು ಮಕ್ಕಳ ವಿಭಾಗಗಳಲ್ಲಿ ತುಳುನಾಡಿನ ವಿಶೇಷ ಆಕರ್ಷಣೆಯ ಸ್ಪರ್ಧೆಗಳಾದ ಕರ ದರ್ಪುನು, ಮಡಲು ಮುಡೆವುನು, ತಾರಾಯಿ ಚೆಪ್ಪು ಕಲೆಪಿನಿ, ತಾರಾಯಿ ಕಟ್ಟುನು, ಚೆನ್ನಮಣೆ, ಪೊಕ್ಕಾಟ, ಗೇರುಬೀಜ ಆಟ, ಸೋಪ್ಪಾಟ, ಬಲ್ಲ್ ಒಯಿಪುನು, ಪಲ್ಲೆದಾಟ, ಜಿಬಿಲಿ, ನೆಲಕ್ ಬೂರಂದಿ ಕೋಲು ಇತ್ಯಾದಿ ಸ್ಪರ್ಧೆಗಳು ಜರುಗಲಿವೆ. ತುಳುನಾಡ ಗೊಬ್ಬುಲು ಕೂಟವನ್ನು ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಶಿಷ್ಟವಾಗಿ ಉದ್ಘಾಟಿಸಲಿರುವರು. ಹೆಚ್ಚಿನ ವಿವರಗಳಿಗೆ: 9844993565, 9449102026
ಅಧ್ಯಕ್ಷರು - ಕಾರ್ಯದರ್ಶಿ - ಸಂಚಾಲಕರು , ತುಳು ಕೂಟ (ರಿ.) ಉಡುಪಿ