Header Ads Widget

ಮೊಬೈಲ್ ಗೀಳಿನಿಂದ ಹೊರಬನ್ನಿ – ಡಾ:ವ್ಯಾಸರಾಜ ತಂತ್ರಿ

 


ಮಕ್ಕಳಲ್ಲಿ ಸುಪ್ತಜ್ಞಾನವು ಪ್ರಕಾಶಮಾನವಾಗಿದ್ದರೂ ಅದನ್ನು ಹೊರತರುವ ಪ್ರಯತ್ನವನ್ನು ಹಿರಿಯರು ಮಾಡಬೇಕು. ಇಂದು ಮಕ್ಕಳಲ್ಲಿ ಕೂಡ ಮೊಬೈಲ್ ಗೀಳು ಹೆಚ್ಚಾಗುತ್ತಿದ್ದು ಅದರಿಂದ ಹೊರಬರಲು ಶಾಲೆಯ ರಜಾದಿನಗಳಲ್ಲಿ ಬೇಸಿಗೆ ಶಿಬಿರವು ಸಹಕಾರಿ’ ಎಂದು ಉಡುಪಿ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ:ವ್ಯಾಸರಾಜ ತಂತ್ರಿ ನುಡಿದರು. 


 ಅವರು ಉಡುಪಿ ಗುಂಡಿಬೈಲಿನಲ್ಲಿರುವ ಅಭಿರಾಮಧಾಮ ಸಾಂಸ್ಕೃತಿಕ ಪ್ರತಿಷ್ಠಾನದ “ವಸಂತ ಶಿಬಿರ-೨೦೨೫”ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾಂಸ ಓಂಪ್ರಕಾಶ್ ಭಟ್ ಮಾತನಾಡಿ, ‘ಹಣವಂತನಿಗಿ0ತ ಗುಣವಂತ ಶ್ರೇಷ್ಠ, ನಮ್ಮ ಸಂಸ್ಕಾರ-ಸ0ಸ್ಕೃತಿಯನ್ನು ಉಳಿಸಿ-ಬೆಳೆಸಲು ವಸಂತ ಶಿಬಿರವು ಒಂದು ಉತ್ತಮ ವೇದಿಕೆ’ ಎಂದು ನುಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಉಡುಪಿ ಪುತ್ತೂರಿನ ಶ್ರೀವಿದ್ಯಾದೇಗುಲದ ಸಂಸ್ಥಾಪಕ ಮಾಧವ ಉಪಾಧ್ಯಾಯ ಅವರು ಮಾತನಾಡಿ ‘ಗಿಡದ ಪೋಷಣೆಗೆ ಸಾರ ಒದಗಿಸುವಂತೆ ಮಕ್ಕಳ ಜೀವನ ಪೋಷಣೆಗೆ ಇಂತಹ ಶಿಬಿರಗಳಲ್ಲಿ ಸಿಗುವ ಸಾರ ಮಹತ್ವವಾದುದು, ಇದನ್ನು ಪಾಲಕರು ಅರ್ಥೈಸಿ ಕೊಂಡು ಅದಕ್ಕೆ ಅವಕಾಶ ಕಲ್ಪಿಸುವುದು ಅಗತ್ಯ’ ಎಂದರು. 


ಪ್ರತಿಷ್ಠಾನದ ನಿರ್ದೇಶಕರಾದ ಡಾ:ಸುದರ್ಶನ ಭಾರತೀಯ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿಡುವಜೆ ರಾಮ ಭಟ್ ವಂದಿಸಿದರು.