Header Ads Widget

ಆಸ್ಟ್ರೋ ಮೋಹನ್ ~ ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ

 


ಉಡುಪಿ, ಎ. 2: ಹಿರಿಯ ಕಲಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ ಮಾಡಿ ಅಕಾಡೆಮಿ ಆದೇಶ ಹೊರಡಿಸಿದೆ.


ಉದಯವಾಣಿ ಮಣಿಪಾಲ ಆವೃತ್ತಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಆಸ್ಟ್ರೋ ಮೋಹನ್ ಕಳೆದ ಮೂರುವರೆ ದಶಕಗಳಿಂದ ಸುದ್ದಿ ಹಾಗೂ ಕಲಾತ್ಮಕ ಛಾಯಾಗ್ರಹಣದಲ್ಲಿ ಸುಪ್ರಸಿದ್ಧರು. ಸುಮಾರು 750 ಕ್ಕೂ ಅಧಿಕ ರಾಷ್ಟ್ರೀಯ-ಅಂತಾರಾಷ್ಟೀಯ ಪುರಸ್ಜಾರಗಳನ್ನು ಪಡೆದಿ ದ್ದಾರೆ. ಉಡುಪಿ - ಮಣಿಪಾಲ ಕುರಿತಂತೆ 5, ಪೇಜಾವರ ಶ್ರೀ ಹಾಗೂ ಪತ್ರಿಕಾ ಛಾಯಾಗ್ರಹಣ ಕುರಿ ತಂತೆ ಒಂದು 8 ಪುಸ್ತಕಗಳು ಪ್ರಕಟವಾಗಿವೆ.


 ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿಯೂ ಇವರ ಕೃತಿಗಳ ಕುರಿತಾಗಿ ಪುಸ್ತಕವನ್ನು ಪ್ರಕಟಿಸಿದೆ. ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕ ಸಂಸ್ಥೆಯು ಆಸ್ಟ್ರೋ ಮೋಹನ್ ಅವರನ್ನು ಅಸಿಸ್ಟೆಂಟ್ ಕಂಟ್ರಿ ಮೆಂಬರ್ಶಿಪ್ ಡೈರೆಕ್ಟರ್ ಆಗಿ ಆಯ್ಕೆಮಾಡಿಕೊಂಡಿದೆ.