ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸಂಕಲ್ಪದಂತೆ ಏ: 9 ರಿಂದ 13 ರವರೆಗೆ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಭಕ್ತಿ ಸಿದ್ಧಾಂತೋತ್ಸವ ರಾಮೋತ್ಸವ ಪ್ರಯುಕ್ತ ಆಯೋಜಿಸಿರುವ ಭಕ್ತಿ ರಥವು ಚಿಟ್ಪಾಡಿ ಶ್ರೀ ಶ್ರೀನಿವಾಸ ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿಪ್ರ ಬಂಧುಗಳು ಹಾಗೂ ಭಕ್ತರು ಅಲಂಕೃತ ರಥವನ್ನು ಪುಷ್ಪಾರ್ಚನೆಗೈದು ಚೆಂಡೆ ವಾದ್ಯ,ಭಜನೆಯೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಬರಮಾಡಿಕೊಂಡರು.
*ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ ಗೋಪಾಲಕೃಷ್ಣ ಬಲ್ಲಾಳ್,ನಗರಸಭಾ ಸದಸ್ಯ ಕೃಷ್ಣ ಕೊಡಂಚ,ತಾ ಬ್ರಾಹ್ಮಣ ಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯ, ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾ ಅಧ್ಯಕ್ಷ ಶ್ರೀ ಕೃಷ್ಣ ರಾಜ್ ಬಲ್ಲಾಳ್ ಬ್ರಾಹ್ಮಣ ಸಂಘದ ಪದಾಧಿಕಾರಿಗಳು,ಊರಿನ ಗಣ್ಯರು ಹಾಜರಿದ್ದರು.*