Header Ads Widget

ಮಲ್ಪೆ : ಮಸೀದಿಗೆ ಸಂಬಂಧಿಸಿದ ಕಟ್ಟಡದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ‌ ಪತ್ತೆ!

ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ‌ ಪತ್ತೆಯಾದ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮಸೀದಿಯ ವ್ಯವಸ್ಥಾಪಕ ಸುಹೇಲ್‌ ಅವರು ನಿನ್ನೆ ಶೌಚಾಲಯಕ್ಕೆ ಹೋದಾಗ ನವಜಾತ ಶಿಶು ಮೃತಪಟ್ಟ‌ ಸ್ಥಿತಿಯಲ್ಲಿ ಬಿದ್ದಿತ್ತು. ತಕ್ಷಣವೇ ಅವರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದ್ದಾರೆ. ಮಗುವಿನ ಜನನವನ್ನು ಮರೆಮಾಚಲು ಯತ್ನಿಸಿರುವ ಸಾಧ್ಯತೆಯಿದೆಂದು ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಮುಂದುವರೆದಿದೆ.