ಉಡುಪಿ: ಲಾಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ(ಮಿಷನ್ ಆಸ್ಪತ್ರೆ)ಯ ಹಿರಿಯ ವೈದ್ಯ, ಕಟಪಾಡಿ ನಿವಾಸಿ ಡಾ. ಗಣೇಶ್ ಕಾಮತ್(71) ಅವರು ಕಳೆದ ರಾತ್ರಿ ತೀವ್ರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಕಳೆದ ಹತ್ತು ವರ್ಷಗಳಿಂದ ಉಡುಪಿಯ ಮಿಷನ್ ಆಸ್ಪತ್ರೆಯಲ್ಲಿ ಯಾವುದೇ ರಜೆಯನ್ನು ಪಡೆಯದೆ ಸಾವಿ ರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಬಂದಿರುವ ಇವರ ಅಗಲಿಕೆ ಆಸ್ಪತ್ರೆಗೆ ತುಂಬಲಾರದ ನಷ್ಟ, ಗಣೇಶ್ ಕಾಮತ್ ಅವರು ನಮ್ಮ ಆಸ್ಪತ್ರೆಯ ಹಿರಿಯ ವೈದ್ಯಕೀಯ ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸುಶೀಲ್ ಜತ್ತನ್ನ ತಿಳಿಸಿದ್ದಾರೆ.