Header Ads Widget

ಕಸಾಪ ಉಡುಪಿ ತಾಲೂಕು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಾಧು ಸಾಲಿಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೊಡವೂರ್ ಆಯ್ಕೆ

 

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ 15ನೇ ಕನ್ನಡ ಸಾಹಿತ್ಯ ಸಮ್ಮೇಳನವು 2025 ಮೇ ತಿಂಗಳ 17ನೇ ತಾರೀಕು ಶನಿವಾರದಂದು ಕೊಡವೂರಿನ ಶಂಕರನಾರಾಯಣ ದೇವಳದ ಸಭಾಂಗಣದಲ್ಲಿ ನಡೆಯಲಿದ್ದು, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸಾಧು ಸಾಲಿಯಾನ್ ಅವರನ್ನು ಏಪ್ರಿಲ್ 20ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 


ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೊಡವೂರು ಹಾಗೂ ವಿವಿಧ ಸಮಿತಿಯ ಸಂಚಾಲಕರನ್ನು ಈ ಸಂದರ್ಭದಲ್ಲಿ ನೇಮಿಸ ಲಾಯಿತು 


 ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕಿನ ಅಧ್ಯಕ್ಷರಾದ ರವಿರಾಜ್ ಎಚ್ ಪಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಬಾರಿಯ ಸಮ್ಮೇಳನದಲ್ಲಿ ಹಿರಿಯ ವಾಗ್ಮಿ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರು, ಕಲಾವಿದರಾದ ಎಂ. ಎಲ್ ಸಾಮಗ ಅವರು ಸಮ್ಮೇಳನ ಅಧ್ಯಕ್ಷರಾಗಿ ನಮ್ಮೊಂದಿಗಿ ರುತ್ತಾರೆ. ಬಹಳ ಅದ್ದೂರಿಯ ಸಮ್ಮೇಳನವನ್ನು ನಡೆಸಲಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು 


ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ದೇವಸ್ಥಾನದ ಟ್ರಸ್ಟಿ ವಾದಿರಾಜ್ ಟಿ. ಸಾಲ್ಯಾನ್,  ಕಸಾಪ ಉಡುಪಿ ತಾಲೂಕು ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿ ಯಾಡಿ, ರಾಘವೇಂದ್ರ ಪ್ರಭು ಕರ್ವಾಲ್, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ  ಉಪಸ್ಥಿತರಿದ್ದರು.  ಗೌರವ ಕಾರ್ಯದರ್ಶಿ ಜನಾರ್ದನ್  ಕೊಡವೂರು ಅವರು ಸ್ವಾಗತಿಸಿದರು.