Header Ads Widget

ಧರ್ಮ ಕೇಳಿ ಜನರ ಜೀವ ತೆಗೆದಾಗ ಮಾತ್ರ ಹೆಣಗಳಂತೆ ಸದ್ದಿಲ್ಲದೆ ಬಿದ್ದುಕೊಂಡ ಬಿಕನಾಸಿಗಳು ~ಜೈ ಮಹಾಕಾಲ್.

 

ವಿಮಾನ ಪ್ರಯಾಣಕ್ಕೆ ಮೊದಲು ಗಗನಸಖಿಯರು ವಿಮಾನ ಬಿದ್ದಾಗ ಹೇಗೆ ಜೀವ ಉಳಿಸಿಕೊಳ್ಳಬೇಕು ಎಂದು ಪ್ರಾತ್ಯಕ್ಷಿಕೆ ನಡೆಸುತ್ತಾರೆ. ಹೆಚ್ಚಿನ ಪ್ರಯಾಣಿಕರು  ಇವರದೆಂತ ನಾಟಕವಪ್ಪ ಎಂದು  ಮೂಗು ಮುರಿಯುತ್ತಾರೆ  ಒಂದು ವೇಳೆ ವಿಮಾನ ಕೈ ಕೊಟ್ಟು ಅನಿವಾರ್ಯವಾಗಿ ನೀರಿಗಿಳಿದರೆ  ಈ ಅವಿವೇಕಿ ಪ್ರಯಾಣಿಕರನ್ನು ಬ್ರಹ್ಮನೂ ಉಳಿಸಲಾರ.. ಏಕೆಂದರೆ ಬದುಕುವ ವಿದ್ಯೆಯನ್ನೇ ಅವರು ಕಡೆಗಣಿಸಿದ್ದರು.


ಇಲ್ಲಿ ಎದ್ದು ಬಿದ್ದು ಓಡಾಡುತ್ತಾ ನಾವೇನು ಮಾಡಿಲ್ಲ ನಮ್ಮನ್ನು ಯಾಕೆ ಕೊಲ್ಲುತ್ತಿದ್ದಾರೆ ಎನ್ನುವ  ಈ ಸೊಕಾಲ್ಡ್ ಹಿಂದುಗಳನ್ನು ಕಂಡಾಗ ನನಗೆ ಇದೆಲ್ಲಾ ನೆನಪಾಯಿತು.  ಇಸ್ಲಾಮಿಕ್ ಜಿಹಾದಿಗಳ ಕ್ರೂರ  ಇತಿಹಾಸದ ಬಗ್ಗೆ, ಇಸ್ಲಾಮಿಕ್ ಸಾಮ್ರಾಜ್ಯಶಾಹಿಗಳ ವಿಸ್ತರಣಾ  ಕೂಟ ನೀತಿಗಳ ಬಗ್ಗೆ , ಜಗತ್ತಿನ ಆಗು ಹೋಗುಗಳ ಬಗ್ಗೆ ಕಣ್ಣಿದ್ದು ಕುರುಡರ ಹಾಗೆ ವರ್ತಿಸುತ್ತಿರುವ ಅವಿವೇಕಿ ಹಿಂದುಗಳೆಲ್ಲ ಇದೇ ರೀತಿ ಬೀದಿ ಹೆಣವಾಗಲಿದ್ದಾರೆ. 


 ಇಲ್ಲಿ ಸತ್ತು ಬಿದ್ದವರು, ಕುಟುಂಬಿಕರನ್ನು ಕಳೆದುಕೊಂಡವರು  ಪಶ್ಚಿಮ ಬಂಗಾಳದಲ್ಲಿ ನಿರಾಶ್ರಿತ ರಾಗಿರುವ ಹಿಂದುಗಳ ಬಗ್ಗೆ ಒಂದು ಕ್ಷಣವು ಯೋಚಿಸಿರಲಿಕ್ಕಿಲ್ಲ! ಅಂತಹದ್ದೊಂದು ಘಟನೆ ನಡೆದಿದೆ ಎನ್ನುವುದು ಇವರಿಗೆ ಗೊತ್ತಿರಲಿಕ್ಕೂ ಇಲ್ಲ.


 ಹಿಂದೂ ಧಾರ್ಮಿಕ ಜಾಗೃತಿಯ ಕೆಲಸದಲ್ಲಿ ತೊಡಗಿಸಿಕೊಂಡಿರುವವರು ನಿಮಗೆ ಈಗ ಜೋಕರ್ ಗಳಂತೆ ಕಾಣಿಸುತ್ತಿರಬಹುದು.  ಆದರೆ ಈ ರೀತಿಯ  ಭಯಾನಕ ಕ್ಷಣಗಳು ನಿಮ್ಮನ್ನು ಮುಖಾಮುಖಿ ಯಾಗುವಾಗ ನಿಮಗೆ ಸತ್ಯದರ್ಶನವಾಗಬಹುದು.


 ನಿಮ್ಮ ಜಾತಿ, ಭಾಷೆ, ಕೆಲಸ, ದುಡ್ಡು, ದೌಲತ್ತು, ಸ್ಟೇಟಸ್,  ಡಿಗ್ರಿ, ಗೌರವ ಘನಸ್ಥಿಕೆಗಳೆಲ್ಲ  ಅವರ ಕ್ರೌರ್ಯದ ಮುಂದೆ ಬೆಲೆ ಕಳೆದುಕೊಂಡು ಬೆತ್ತಲಾಗುತ್ತವೆ.


 ಜಮ್ಮು ಕಾಶ್ಮೀರದ ಪೆಹಲ್ಗಾವ್ ಎಂಬಲ್ಲಿ ಹಿಂದುಗಳನ್ನು  ಗುರುತಿಸಿ ಖಾತ್ರಿಪಡಿಸಿಕೊಂಡು ಜಿಹಾದಿಗಳು  ಗುಂಡು ಹೊಡೆದಿದ್ದಾರೆ.  ಈವರೆಗೆ 27 ಮೃತಪಟ್ಟಿದ್ದು ಅನೇಕ ಜನ ಗಾಯಗೊಂಡಿದ್ದಾರೆ  ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.


 ಧರ್ಮ ನೋಡಿ ವ್ಯಾಪಾರ ಮಾಡಿ  ಎಂದಾಗ  ಎದ್ದು ಬಿದ್ದು ಪೋಸ್ಟ್ ಹಾಕಿದ ಹೇಳಿಕೆ ಕೊಟ್ಟ  ಭಂಡ ಬಿಕನಾಸಿಗಳೆಲ್ಲ  ಈಗ ಧರ್ಮ ಕೇಳಿ  ನೂರಾರು ಜನರ ಜೀವ ತೆಗೆದಾಗ ಮಾತ್ರ  ಹೆಣಗಳಂತೆ ಸದ್ದಿಲ್ಲದೆ ಬಿದ್ದುಕೊಂಡಿದ್ದಾರೆ 


ಜೈ ಮಹಾಕಾಲ್.