Header Ads Widget

ಪತ್ರಕರ್ತ ವೆಂಕಟೇಶ ಪೈ ಅವರಿಗೆ ‘ಡಾ.ಬಿ.ಆರ್.ಅಂಬೇಡ್ಕರ್ ಗೌರವ ಪ್ರಶಸ್ತಿ’

ಬೆಂಗಳೂರು:  ಪೊಲಿಟಿಕಲ್ ಅಡ್ವೈಸರ್ ಪತ್ರಿಕೆಯ ಸಂಪಾದಕರಾದ ಎಂ.ಶಾಂತಾರಾಜು ರವರ ನೇತೃತ್ವದಲ್ಲಿ ಜೈ ಭೀಮ್ ಜನಸೇವಾ ಸಮಿತಿ ಕರ್ನಾಟಕ, ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಸಂಜೆಪ್ರಭ ಪತ್ರಿಕೆಯ ಸಂಪಾದಕ ವೆಂಕಟೇಶ್ ಪೈ ಅವರಿಗೆ “ಡಾ.ಬಿ.ಆರ್. ಅಂಬೇಡ್ಕರ್ ಗೌರವ ಪ್ರಶಸ್ತಿ” ನೀಡಿ ಗೌರವಿಸಿದರು.

ಸಾರಿಗೆ ಇಲಾಖೆಯ ಉಪ ಆಯುಕ್ತರಾದ ಸಿದ್ಧಪ್ಪ ಕಲ್ಲೇರ, ವಿಧಾನಸಭೆ ಐ.ಟಿ.ವಿಭಾಗದ ನಿರ್ದೇಶಕರಾದ ಜೆ.ಇ.ಶಶಿಧರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಕಾಂಗ್ರೆಸ್ ಮುಖಂಡರಾದ ಜಯರಾಂ ಮಾಗಡಿ, ಎಂ ಶಾಂತಾರಾಜು ಮುಂತಾದವರು ಉಪಸ್ಥಿತರಿದ್ದರು.