Header Ads Widget

​​ ಪಾಕ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಭಾರತ

 

ಹೊಸದಿಲ್ಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯಲ್ಲಿ ಬುಧವಾರ ಹೊಸದಿಲ್ಲಿಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ ಉನ್ನತ ಮಟ್ಟದ ಸಭೆ ನಡೆಯಿತು. 

ಸಿಂಧೂನದಿ ನೀರು ಒಪ್ಪಂದ ಅಮಾನತು, ಪಾಕ್ ಪ್ರಜೆಗಳಿಗೆ 48 ಗಂಟೆಗಳಲ್ಲಿ ಭಾರತ ತೊರೆಯಲು ಗಡುವು ಸೇರಿದಂತೆ 5 ಮಹತ್ವದ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ಶಾ, ರಕ್ಷಣಾ ಸಚಿವ ರಾಜನಾಥ್ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸಭೆಯಲ್ಲಿ ಪಾಲ್ಗೊಂಡಿದ್ದರು.  ​

5 ಪ್ರಮುಖ ನಿರ್ಧಾರಗಳು:  1. ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದ ಅಮಾನತು. ಪಾಕಿಸ್ತಾನಕ್ಕೆ 39 ಬಿಲಿಯನ್ ಕ್ಯೂಬಿಕ್ ಮೀಟರ್ ನೀರನ್ನು ಹರಿಸುವ ಸಹಕಾರ ಒಪ್ಪಂದ ಸ್ಥಗಿತ.  

2. ಎಸ್ಪಿಇಎಸ್ ವೀಸಾದಡಿ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳು 48 ತಾಸುಗಳೊಳಗೆ ಭಾರತ ತೊರೆಯಬೇಕು.  ​ 

3. ಅಟ್ಟಾರಿ ಗಡಿಯಲ್ಲಿರುವ ಚೆಕ್ಪೋಸ್ಟ್ ತಕ್ಷಣದಿಂದಲೇ ಬಂದ್. ಅಧಿಕೃತ ದಾಖಲೆಗಳೊಂದಿಗೆ ಈ ಗಡಿಮಾರ್ಗವಾಗಿ ಭಾರತ ಪ್ರವೇಶಿಸಿದವರು 2025ರ ಮೇ 1ರೊಳಗೆ ವಾಪಸ್ ಹೋಗಬೇಕು. 

4. ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನದ ಹೈಕಮೀಶನ್ ಕಚೇರಿಯಲ್ಲಿರುವ ರಕ್ಷಣಾ, ಸೇನಾ, ನೌಕಾಪಡೆ ಹಾಗೂ ವಾಯುಪಡೆ ಸಲಹೆಗಾರರು ಒಂದು ವಾರದೊಳಗೆ ಭಾರತದಿಂದ ಹೊರಹೋಗಬೇಕು.  

5. ಭಾರತ ಕೂಡಾ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮೀಶನ್ ಕಚೇರಿಯಿಂದ ತನ್ನ ರಕ್ಷಣಾ, ನೌಕಾದಳ ಹಾಗೂ ವಾಯುಪಡೆ ಸಲಹೆಗಾರರನ್ನು ಹಿಂದಕ್ಕೆ ಕರೆಸಿಕೊಳ್ಳಲಿದೆ.​