ಉಡುಪಿ ನಗರ ಪೊಲೀಸ್ ಠಾಣಾ ನಿರೀಕ್ಷಕರಾದ ಮಂಜುನಾಥ ವಿ ಬಡಿಗೇರ್ ಹಾಗೂ ಪೊಲೀಸ್ ಉಪನಿರೀಕ್ಷಕರುಗಳಾದ ಪುನೀತ್ ಕುಮಾರ್ ಬಿ ಈ, ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ ಮತ್ತು ಗೋಪಾಲಕೃಷ್ಣ ಜೋಗಿ ಮತ್ತು ಠಾಣಾ ಗಣಕಯಂತ್ರ ಸಿಬ್ಬಂದಿಯವರಾದ ಪಿಸಿ ವಿನಯಕುಮಾರ ಅವರ ತಂಡ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ KSP app ಮುಖೇನಾ ಮೊಬೈಲ್ ಕಾಣೆಯಾದ ದೂರುಗಳು ಸ್ವೀಕರಿಸಿದ್ದು, ನಂತರ ಸದರಿ ಮೊಬೈಲ್ ಗಳನ್ನು ಭಾರತ ಸರ್ಕಾರ ಜಾರಿಗೆ ತಂದಿರುವ CEIR ಪೋರ್ಟಲ್ ಅಪ್ಲಿಕೇಷನ್ ಅಡಿಯಲ್ಲಿ ಮೊಬೈಲ್ ಗಳನ್ನು ಬ್ಲಾಕ್ ಮಾಡಿದ್ದು, 2025 ನೇ ಸಾಲಿನಲ್ಲಿ CEIR ಪೋರ್ಟಲ್ ಮುಖಾಂತರ 32 ಮೊಬೈಲ್‌ಗಳನ್ನು ಪತ್ತೆಹಚ್ಚಿ, ಈಗಾಗಲೇ ದೂರುದಾರರಿಗೆ ಹಸ್ತಾಂತರಿಸಿದ್ದು, ಸದರಿ ಮೊಬೈಲ್ ಗಳ ಅಂದಾಜು ಒಟ್ಟು 4.5 ಲಕ್ಷ ರೂ ಮೌಲ್ಯ ಆಗಿರುತ್ತದೆ.
ಈ ದಿನ ದಿನಾಂಕ:09-04-2025 ರಂದು 27 ಮೊಬೈಲ್ ಗಳನ್ನು ಕಳೆದುಕೊಂಡ ದೂರು ಅರ್ಜಿದಾರರನ್ನು ಠಾಣೆಗೆ ಕರೆಸಿ ಉಡುಪಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪ್ರಭು ಡಿ.ಟಿ. ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ನಿರೀಕ್ಷಕರಾದ ಮಂಜುನಾಥ ವಿ ಬಡಿಗೇರ್ ಹಾಗೂ ಪೊಲೀಸ್ ಉಪನಿರೀಕ್ಷಕರುಗಳಾದ ಪುನೀತ್ ಕುಮಾರ್ ಬಿ ಈ, ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ ಮತ್ತು ಗೋಪಾಲಕೃಷ್ಣ ಜೋಗಿ ಇವರುಗಳು ಹಸ್ತಾಂತರ ಮಾಡಿರುತ್ತಾರೆ.