Header Ads Widget

ಜಮ್ಮುಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಭಾವಪೂರ್ಣ ಶೃದ್ದಾಂಜಲಿ: ಸಲೀಂ ಅಂಬಾಗಿಲು

 

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ನಮ್ಮ ಸಹೋದರ, ಸಹೋದರಿಯರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಸಲ್ಲಿಸುತ್ತಿದ್ದೇನೆ. ನಮ್ಮ ಹಿಂದೂ ಸಹೋದರ, ಸಹೋದರಿಯರ ಪ್ರಾಣ ತೆಗೆದ ಆ ರಕ್ತ ಪಿಪಾಸುಗಳನ್ನು ಕೂಡಲೇ ಬಂಧಿಸಿ ಗಲ್ಲಿಗೇರಿಸ ಬೇಕು ಎಂದು ಭಾರತ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.


ಇದೇ ಸಂಧರ್ಭದಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಕರ್ತವ್ಯ ನಿರತರಾಗಿರುವ ದೇಶದ ಹೆಮ್ಮೆಯ ಸೈನಿಕರ ಕರ್ತವ್ಯ ಪ್ರಜ್ಞೆಗೆ ಹಾರೈಕೆಗಳು ಎಂದು ಬಿಜೆಪಿ ಮುಖಂಡರು ಹಾಗು ಮಾಜಿ ರಾಜ್ಯ ಹಜ್ಜ್ ಸಮಿತಿ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ರಾದ ಎಂ.ಸಲೀಂ ಅಂಬಾಗಿಲು ತಿಳಿಸಿರುತ್ತಾರೆ.